ಮನಸೇ ಮಾಯಾ ನದಿಯ ಹಾಗೆ ಹರಿವಾ ಧಾರೆ ಅನುರೂಪಿ ಮಳೆಬಿಲ್ಲೇರಿ ನಗುವ ತೇಲಿ ಬದುಕೇ ಬಣ್ಣ ಬಹುರೂಪಿ ಸೆಳೆವಾ ಈ ಸುಂದರೆ ನಲಿವಾ ವಸುಂಧರೆ ಸೆಳೆವಾ ಈ ಸುಂದರೆ ನಲಿವಾ ವಸುಂಧರೆ ವರ್ಣಿಸಲು ಈ ಚಂದ್ರಿಕೆ ಸೋತಿಹುದೆ ಸ್ವರಮಾಲಿಕೆ ನಗುವಿನಲೇ ಸುಳಿವಿರದೇ ಅಪಹರಿಸಿದಳೇ ಮಧುಗುಂಜನ ಈ ಮಂಜಿನ ಹನಿ ಮನರಂಜನ ನೀನಾಡುವ ದನಿ ಮಧುಗುಂಜನ ಈ ಮಂಜಿನ ಹನಿ ಮನರಂಜನ ನೀನಾಡುವ ದನಿ ಸಾರಂಗಿಯು ರಂಗೇರಿದೆ ನವರಂಗಿ ನಲಿವಾಗ ನವಿಲೂರಿನಾ ನವಿಲೇ ನಿನ್ನ ಪ್ರೇರಣೆ ಏನಮ್ಮ ಮದರಂಗಿಯು ನಿನ ಅಂಗೈಲೇ ರಂಗೋಲಿ ಇಡುವಾಗ ವನಸಿರಿಯ ನಡುವೆ ಅರಳಿದ ಏ ತಾರೆ ನೀನೇನಮ್ಮ ಆರೋಹದಿ ಮೌನರಾಗ ಅನುರಾಗಿಯಾಗೋದೇ ಈಗ ಮನಸಿನ ಬೀದಿಯಲ್ಲಿ ನೀನೆ, ನೀನೆ ಮಧುಗುಂಜನ ಈ ಮಂಜಿನ ಹನಿ ಮನರಂಜನ ನೀನಾಡುವ ದನಿ ಮಧುಗುಂಜನ ಈ ಮಂಜಿನ ಹನಿ ಮನರಂಜನ ನೀನಾಡುವ ದನಿ